'ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ' ಎನ್ನುವ ಹಾಗೇ ಲಾಕ್ ಡೌನ್ ಮುಗಿದರೂ ಶಾಲಾರಂಭವಾಗಲೇ ಇಲ್ಲ. ವಿದ್ಯಾಗಮ ಸಲೀಸಾಗಿ ನಡೆದಿತ್ತಾದರೂ ಕೊರೋನಾ ಅಲ್ಲಲ್ಲಿ ಶಿಕ್ಷಕರನ್ನು ಬಲಿ ಪಡೆದ ಸುದ್ದಿ ಮಾಧ್ಯಮಗಳಲ್ಲಿ ವರದಿಯಾದ ಕಾರಣ ವಿದ್ಯಾಗಮ ಕೂಡ ಸ್ಥಗಿತಗೊಂಡಿತು. ಈ ಮಧ್ಯೆ ದಸರೆಯ ರಜೆ ಬಂದು ಹೋಯಿತು. ಆದರೂ ಶಾಲಾರಂಭದ ಸುಳಿವೇ ಇಲ್ಲ..
ಈ ಮಧ್ಯೆ ನಮ್ಮಶಾಲೆಯಲ್ಲಿ ಸುಮಾರು ವರ್ಷಗಳಿಂದ ನಾನ್ ಫಂಕ್ಷನಲ್ ಆಗಿದ್ದ ಬಾಲಕರ ಶೌಚಾಲಯವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಂಡೆವು. ನವೆಂಬರ್ 1 ರಿಂದ ಶುರುಮಾಡಿ ಇಲ್ಲಿಯವರೆಗೆ ಅಷ್ಟಿಷ್ಟು ಸ್ವಚ್ಛಗೊಳಿಸಿ ಬಳಕೆಗೆ ಲಭ್ಯವಾಗುವಂತೆ ಮಾಡಿದೆವು. ಇದರಲ್ಲಿ ನಮ್ಮಶಾಲಾ ಸಹಶಿಕ್ಷಕರ ಸಹಕಾರ ಮರೆಯುವುದೆಂತು. ಪ್ಯಾಚಿಂಗ್,ಪೇಂಟಿಂಗ್ ಮತ್ತು ಪ್ಲಂಬಿಂಗ್ ಬಾಕಿ ಇವೆ..ಸದ್ಯಕ್ಕಿಷ್ಟು..
ಮೊದಲು...
ನಂತರ...
No comments:
Post a Comment