ನಾನು ಯಾವಾಗಲೂ ಓದುತ್ತೇನೆ.ಶಾರ್ಕ್‌ಗಳು ಈಜುತ್ತಲೇ ಇರುತ್ತವೆ, ಇಲ್ಲವಾದಲ್ಲಿ ಅವು ಸಾಯುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ನಾನೂ ಕೂಡ ಹಾಗೆ. ಓದುವುದನ್ನು ನಿಲ್ಲಿಸಿದರೆ ಸಾಯುತ್ತೇನೆ... -- ಪ್ಯಾಟ್ರಿಕ್ ರೋಫಸ್

೬. ಸಹೋದ್ಯೋಗಿಗಳೊಂದಿಗೆ ಸಮಾಲೋಚನೆ

ಈ ರಜಾವಧಿಯಲ್ಲಿ ಸಾಕಷ್ಟು ಶಿಕ್ಷಕರು ವಠಾರ ಶಾಲೆ,ಸಮುದಾಯ ಶಾಲೆ ಅಂತಹ ವಿಶಿಷ್ಟ ಕಾರ್ಯಕ್ರಮಗಳ‌ ಮೂಲಕ ವಿದ್ಯಾರ್ಥಿಗಳನ್ನು ತಲುಪುತ್ತಿದ್ದಾರೆ. ನನಗೂ ಸಹ ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂಬ ಮಹದಾಸೆ. ಆ ನಿಟ್ಟಿನಲ್ಲಿ ವಿದ್ಯಾಗಮ ಕಾರ್ಯಕ್ರಮ ಕೂಡ ಬರುತ್ತಿದೆ. ಇಂತಹ ವಿವಿಧ ಅಂಶಗಳ ಬಗ್ಗೆ ನಾನು ನನ್ನ ಸಹೋದ್ಯೋಗಿಗಳ ಜತೆ ಸಾಕಷ್ಟು ಚರ್ಚೆಯಲ್ಲಿ ಭಾಗಿಯಾಗಿ ನನ್ನ ಜ್ಞಾನವನ್ನು ಹೆಚ್ಚಿಸಿಕೊಂಡೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ದಿನಾಂಕ:18/07/2020,ಶನಿವಾರ
ನಮ್ಮ ಶಾಲೆಯ ಎಲ್ಲ ಶಿಕ್ಷಕರು:

ಇಂದು ಮೈಕ್ರೋಸಾಫ್ಟ್ ಟೀಮ್ಸ್  ವೆಬಿನಾರ್ ಮೂಲಕ ನಮ್ಮ ಶಾಲೆಯ ಮುಖ್ಯಗುರುಗಳು ಹಾಗೂ ಎಲ್ಲರೂ ಸಹಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಲಾಯಿತು. 10 ಹೋಮ್ ಅಸೈನ್ ಮೆಂಟ್ಗಳನ್ನು ಪೂರ್ಣಗೊಳಿಸುವ ಬಗ್ಗೆ ಚರ್ಚಿಸಲಾಯಿತು.


ದಿನಾಂಕ: 19/07/2020,ಭಾನುವಾರ
ಶ್ರೀಮತಿ ಆಶಾ ಹೆಗಡೆ,ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಳಕುಂದಾ(ಬಿ), ತಾ. ಕಲಬುರಗಿ ದಕ್ಷಿಣ, ಜಿ. ಕಲಬುರಗಿ, ಮೊ: 9900488383

ಶ್ರೀಮತಿ ಆಶಾ ಹೆಗಡೆಯವರು 2019-20 ನೆಯ ಸಾಲಿನ ರಾಜ್ಯ ಮಟ್ಟದ ಶಿಕ್ಷಕಿ ಪ್ರಶಸ್ತಿ  ವಿಜೇತರು. ಇವರು ತಮ್ಮ ಶಾಲೆಯಲ್ಲಿ ಸಾಕಷ್ಟು ರೀತಿಯ ಸಂಪನ್ಮೂಲಗಳನ್ನು ಕ್ರೂಢೀಕರಿಸಿದ್ದಾರೆ. ಸಮುದಾಯದೊಂದಿಗೆ ಶಾಲೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ನಲಿ‌ಕಲಿ ರಾಜ್ಯ ಸಂಪನ್ಮೂಲ ‌ವ್ಯಕ್ತಿಯಾಗಿ ತಮ್ಮ ಶಾಲೆಯ ನಲಿ‌ಕಲಿ‌ ಮಕ್ಕಳ ಕಲಿಕೆಯನ್ನು ಗುಣಾತ್ಮಕವಾಗಿಸಿದ್ದಾರೆ. ಈ ಎಲ್ಲ ಸಾಧನೆಗಳಿಗೆ ಅವರಿಗೆ ನೆರವಾದ ಅಂಶಗಳೇನು.? ಅವರು ಎದುರಿಸಿದ ಸವಾಲುಗಳೇನು ಎಂಬುದನ್ನು ಅವರೊಡನೆ ಚರ್ಚಿಸಲಾಯಿತು. ನಮ್ಮ ‌ಸಾಧನೆಗೆ ನಮ್ಮ‌ಶಾಲಾ ಮಕ್ಕಳೇ ಸ್ಫೂರ್ತಿ. ಅವರನ್ನು ಸುಶಿಕ್ಷಿತರನ್ನಾಗಿ ಮಾಡುವುದರಲ್ಲೇ ನಮ್ಮ ನಿಜವಾದ ಬೆಳವಣಿಗೆ ಇದೆ ಎಂದು ಅವರು ವಿವರಿಸಿದರು.

ದಿನಾಂಕ : 20/07/2020, ಸೋಮವಾರ
ಶ್ರೀ ಲಕ್ಷ್ಮಣ ಹಿಪ್ಪರಗಿ,ಟಿಜಿಟಿ, ಸ.ಹಿ.ಪ್ರಾ.ಶಾಲೆ ಹುಲ್ಲೂರು ತಾ. ಜೇವರ್ಗಿ, ಜಿ.ಕಲಬುರಗಿ,ಮೊ: 8746068475

ಹುಲ್ಲೂರ ಶಾಲೆಯ ಟಿಜಿಟಿ ಶಿಕ್ಷಕರಾದ ಶ್ರೀ ಲಕ್ಷ್ಮಣ ಹಿಪ್ಪರಗಿ ಅವರೊಂದಿಗೆ ಸಮಾಲೋಚಿಸಲಾಯಿತು. ಅವರು ತಮ್ಮ‌ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಪ್ರಯೋಗಾಲಯಗಳನ್ನು ಸಿದ್ಧಪಡಿಸಿದ್ದಾರೆ. ಇವುಗಳಿಗಾಗೊ ಅವರು ಪಟ್ಟ ಪರಿಶ್ರಮ, ಅವರು ಎದುರಿಸಿದ ಸವಾಲುಗಳನ್ನು ಅವರೊಂದಿಗೆ ಚರ್ಚಿಸಲಾಯಿತು.ಅವರ ವಿವರಣೆಯಿಂದಾಗಿ ನಾನೂ ಸಹ ನಮ್ಮ ಶಾಲೆಯಲ್ಲಿ ಇಂತಹ ಒಂದು ಬದಲಾವಣೆ ಸಾಧ್ಯವಿದೆಯೇ ಎಂದು ಅಂತರಾವಲೋಕನ ಮಾಡಿಕೊಳ್ಳುವಂತಾಯಿತು.

ದಿನಾಂಕ : 21/07/2020, ಮಂಗಳವಾರ
ಶ್ರೀ ರವೀಂದ್ರ ರುದ್ರವಾಡಿ,ಸ.ಶಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂದಗೂರು, ತಾ.ಆಳಂದ, ಜಿ‌.ಕಲಬುರಗಿ
ಮೊ: 8722518491

ರವೀಂದ್ರ ಅವರು ವಿಶಿಷ್ಠ ವ್ಯಕ್ತಿತ್ವವುಳ್ಳವರು. ಮಹಾರಾಷ್ಟ್ರ ಗಡಿಯಲ್ಲಿರುವ ನಂದಗೂರು ಮರಾಠಿ ಪ್ರಭಾವವಿರುವ ಗ್ರಾಮ. ಆದರೂ ಅವರೂ ಅಲ್ಲಿ ಕನ್ನಡದ ಕಂಪನ್ನು ಹರಿಸಿದ್ದಾರೆ. ಮಕ್ಕಳಿಗೆ ಸ್ವಂತ ಖರ್ಚಿನಿಂದ ಪುಸ್ತಕಗಳನ್ನು ಖರೀದಿಸಿ ಪ್ರತಿ ವರ್ಷ ಕನ್ನಡ‌ ಸಾಹಿತ್ಯ ಸಮ್ಮೇಳನ‌ ಏರ್ಪಡಿಸುತ್ತಾರೆ. ಕನ್ನಡ ಲೇಖನಗಳು,ಪದ್ಯಗಳನ್ನು ಬರೆಯಿಸಿ 'ಅಂಕುರ' ಎಂಬ ಶಾಲಾ ಪತ್ರಿಕೆಯನ್ನೂ ಕೂಡ ಹೊರ ತರುತ್ತಿದ್ದಾರೆ. ಇವೆಲ್ಲದರ ಬಗ್ಗೆ ಅವರೊಂದಿಗೆ ಸಮಾಲೋಚಿಸಿ, ಇಂತಹ ನಡೆಗಳು ನನಗೆ ಹೇಗೆ ನೆರವಾಗಬಲ್ಲವು ಎಂಬುದನ್ನೂ ಸಹ ಚರ್ಚಿಸಲಾಯಿತು.


ದಿನಾಂಕ : 22/07/2020, ಬುಧವಾರ
ಶ್ರೀಮತಿ ಸಂಗೀತಾ ಮತ್ತು ಶ್ರೀ ರವಿಚಂದ್ರ ಅತನೂರ ಶಿಕ್ಷಕ ದಂಪತಿಗಳು, ಸರ್ಕಾರಿ ಮಾದರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಅಫಜಲಪೂರ, ಜಿ.ಕಲಬುರಗಿ
ಮೊ: 7411249043

ಈ ಶಿಕ್ಷಕ ದಂಪತಿಗಳು ತುಂಬಾ ಕ್ರಿಯಾಶೀಲ ಶಿಕ್ಷಕರಾಗಿದ್ದು ಇಲಾಖೆ ವಹಿಸುವ ಎಲ್ಲ ಜಬಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಶ್ರೀ ರವಿಚಂದ್ರ ಅವರೊಂದಿಗೆ ಸೇತು ಬಂಧ ಕಾರ್ಯಕ್ರಮ ರೂಪಿಸುವಾಗ ಸಾಕಷ್ಟು ಮೂಲಭೂತ ಅಂಶಗಳನ್ನು ಚರ್ಚಿಸಿ ತಿಳಿದುಕೊಂಡೆನು. ಮಕ್ಕಳ‌ ಹಬ್ಬದಲ್ಲಿ ಪರಿಚಯವಾಗಿದ್ದ ಇವರ ಜತೆ ಸಾಕಷ್ಟು ಸಮಾಲೋಚನೆ ನಡೆಸಿ ನಮ್ಮ ವೃತ್ತಿಯ ಚೆಂದ ಹೆಚ್ಚಿಸುವ ಬಗೆಯನ್ನು ಅರಿತುಕೊಂಡೆನು. ಶ್ರೀಮತಿ ಸಂಗೀತಾ ಅವರು ಒಬ್ಬ ಸಂಪನ್ಮೂಲ ಶಿಕ್ಷಕಿಯಾಗಿದ್ದು, ಇಂಗ್ಲಿಷ್ ಕಲಿಕೆಯ ಕುರಿತಾದ ಅನೇಕ ವಿಷಯಗಳನ್ನು ತಿಳಿದುಕೊಳ್ಳಲಾಯಿತು. 


ದಿನಾಂಕ : 23/07/2020, ಗುರುವಾರ,
ಶ್ರೀ ಚಂದ್ರಶೇಖರ ಪವಾರ,ಗಣಿತ ಪಂಡಿತರು, ಸರ್ಕಾರಿ ಪ್ರೌಢಶಾಲೆ ಪೇಠಶಿರೂರ, ತಾ.ಚಿತ್ತಾಪೂರ, ಜಿ.ಕಲಬುರಗಿ
ಮೊ: 9741420662

ಶ್ರೀ ಚಂದ್ರಶೇಖರ ಪವಾರ ಅವರ ಜತೆ ಇ-ಕಂಟೆಂಟ್ ಕುರಿತಂತೆ ಪಿಪಿಟಿ ತಯಾರಿಕೆ, ಇ-ಕಂಟೆಂಟ್  ಟೂಲ್‌ಗಳ ಬಗ್ಗೆ ಚರ್ಚಿಸಿಲಾಯಿತು.ಅವರು ವೆಬಿನಾರ್ ಮೂಲಕ ಸಾಕಷ್ಟು ಮಾಹಿತಿಗಳನ್ನು ನೀಡಿದರು.


ದಿನಾಂಕ : 24/07/2020,ಶುಕ್ರವಾರ
ಶ್ರೀ ಪ್ರಶಾಂತ ಕಂಬಾರ, ಸ.ಶಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೇಠಶಿರೂರ ತಾ. ಚಿತ್ತಾಪೂರ, ಜಿ. ಕಲಬುರಗಿ
ಮೊ: 9902814361

ಈ ಶಿಕ್ಷಕರು ಮೊದಲು ಬಿ.ಆರ್.ಪಿ ಆಗಿದ್ದಾಗಿನಿಂದ ಪರಿಚಯ. ಪ್ರಶಾಂತ ಅವರ ಜೊತೆ ಪ್ರಯೋಗ ದರ್ಪಣ ಕೈಪಿಡಿ ತಯಾರಿ ಮಾಡುವಾಗ ಸಾಕಷ್ಟು ಅಂಶಗಳನ್ನು ಚರ್ಚೆ ಮಾಡಿದ್ದೆ. ಅವರು ತರಗತಿಯಲ್ಲಿ ಉಪಯೋಗಿಸುತ್ತಿದ್ದ Argumental Reality ಬಗ್ಗೆ ಅನೇಕ‌ ಚರ್ಚೆ ಮಾಡಿ ನಾನೂ ಸಹ ತರಗತಿಯಲ್ಲಿ ಅಳವಡಿಸಿಕೊಳ್ಳಲು ನಿಶ್ಚಯಿಸಿದೆನು.


ದಿನಾಂಕ : 25/07/2020, ಶನಿವಾರ
ಶ್ರೀ ರಾಘವೇಂದ್ರ ಖೋದಾಂಪುರ, ವಿಜ್ಞಾನ ಪಂಡಿತರು, ಸರ್ಕಾರಿ ಪ್ರೌಢ ಶಾಲೆ ಕಲ್ಲಹಂಗರಗಾ ಜಿ. ಕಲಬುರಗಿ
ಮೊ: 8971514613

ಸದರಿಯವರು ಮೊದಲು ನನಗೆ ಯ್ಯೂ ಟ್ಯೂಬರ್ ಆಗಿ ಪರಿಚಯ. ಅವರ ಸಾಕಷ್ಟು ವಿಡಿಯೋಗಳನ್ನು ನಾನು ನೋಡಿದ್ದೆ. ಅವರೊಂದಿಗೆ ಸರಳವಾಗಿ ಮೊಬೈಲ್ ಬಳಸಿ ಯಾವ ರೀತಿ ವಿಡಿಯೋ ಪಾಠಗಳನ್ನು ತಯಾರಿಸಬಹುದು ಎಂಬುದರ ಬಗ್ಗೆ ಚರ್ಚಿಸಿದೆನು. ರಾಘವೇಂದ್ರ ಅವರು ಆಗಾಗ ಅನೇಕ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.


ದಿ.26/07/2020, ಭಾನುವಾರ
ಶ್ರೀ ಪ್ರವೀಣ ಹೆಚ್.ವಿ, ಬಿ.ಆರ್.ಪಿ ಕಲಬುರಗಿ
ಮೊ: 7760569408

'ವೆಬಿನಾರ್ ಐಸಿಟಿ ಟೂಲ್ಸ್' ಎಂಬ ವೆಬಿನಾರ್ ಗ್ರೂಪ್ ಮೂಲಕ ಪರಿಚಿತರಾದ ಪ್ರಶಾಂತ್ ಅವರು ಸಾಕಷ್ಟು ಇ- ಜ್ಣಾನ ಉಳ್ಳವರು. ನಮಗೆ H5P ಬಗ್ಗೆ ವಿವರವಾಗಿ ವೆಬಿನಾರ್ ತರಬೇತಿ ನೀಡಿದ್ದ ಅವರೊಂದಿಗೆ ಮತ್ತಷ್ಡು ರೀತಿಯಲ್ಲಿ ಇ-ಕಂಟೆಂಟ್ ತಯಾರಿಸುವ ಬಗೆಯನ್ನು ತಿಳಿದುಕೊಂಡೆನು. ಸುಲಭವಾಗಿ ಇ-ಕಂಟೆಂಟ್ ತಯಾರು ಮಾಡುವ ವಿಧಾನವನ್ನು ಸರಳವಾಗಿ ಅವರೊಂದಿಗೆ ಚರ್ಚಿಸಿ ತಿಳಿದುಕೊಳ್ಳಲಾಯಿತು.


ದಿನಾಂಕ : 27/07/2020, ಸೋಮವಾರ
ಶ್ರೀ ಅವಿನಾಶ, ಸಂಪನ್ಮೂಲ ವ್ಯಕ್ತಿಗಳು, ಎಪಿಎಫ್ ಜೇವರ್ಗಿ
ಮೊ: 9986269640
ಅವಿನಾಶ ಅವರು ಅಜೀಂ ಪ್ರೇಂಜೀ ಫೌಂಡೇಷನ್ನಿನ ಒಂದು ತರಬೇತಿಯಲ್ಲಿ ಪರಿಚಯ. ಮೊನ್ನೆ ನಡೆದ ವಿಜ್ಞಾನ ತರಬೇತಿಯಲ್ಲಿ 'ಗಾಳಿ' ಪರಿಕಲ್ಪನೆ ಕುರಿತಾದ ಅನೇಕ ವಿಷಯಗಳನ್ನು ಚರ್ಚಿಸಲಾಯಿತು. ಅದಕ್ಕೆ ಸಂಬಂಧಿಸಿದ ಸಂಪನ್ಮೂಲಗಳನ್ನು ಹಂಚಿಕೊಂಡರು. ಅದರ ಕುರಿತು ಅವರೊಂದಿಗೆ ಚರ್ಚಿಸಿ ತರಗತಿಯಲ್ಲಿ ಯಾವ ರೀತಿ ಅದನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಲಾಯಿತು.



ದಿನಾಂಕ : 28/07/2020, ಮಂಗಳವಾರ
ಶ್ರೀ ಮೃತ್ಯುಂಜಯ ಹಿರೇಮಠ, ಟಿಜಿಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವೆಂಕಟಬೇನೂರ, ತಾ. ಕಲಬುರಗಿ ಉತ್ತರ, ಜಿ. ಕಲಬುರಗಿ,ಮೊ: 9900534579

ಮೃತ್ಯುಂಜಯ ಹಿರೇಮಠ ಅವರು ಒಂದು ವಿಜ್ಞಾನ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ  ಪರಿಚಯವಾದರು. ಅವರು ಮೊನ್ನೆ ನಡೆದ 6-8 ಶಿಕ್ಷಕರ ವಿಜ್ಞಾನ ತರಬೇತಿಯಲ್ಲೂ ಕೂಡ ಸಂಪನ್ಮೂಲ ‌ವ್ಯಕ್ತಿಯಾಗಿದ್ದರು. ಅವರೊಂದಿಗೆ ವಾಟ್ಸಪ್ ಗ್ರೂಪ್‌ನಲ್ಲಿ ಹಾಗೂ ವೆಬಿನಾರ್ ನಲ್ಲಿ ವಿಜ್ಞಾನದಲ್ಲಿನ ವಿವಿಧ ಪರಿಕಲ್ಪನೆಗಳನ್ನು ತರಗತಿಯಲ್ಲಿ ಸುಲಭವಾಗಿ ಹೇಗೆ ಕಲಿಸಬೇಕು ಎಂಬುದರ ಬಗ್ಗೆ ಚರ್ಚಿಸಲಾಯಿತು. 



ದಿನಾಂಕ : 29/07/2020, ಬುಧವಾರ
ಶ್ರೀಮತಿ ರಾಜೇಶ್ವರಿ ಬಿ.ಕೆ, ಸ.ಶಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜವಳಗಾ, ತಾ. ಜೇವರ್ಗಿ, ಜಿ.ಕಲಬುರಗಿ
ಮೊ: 9880341023

ರಾಜೇಶ್ವರಿಯವರೊಂದಿಗೆ ನಲಿ‌ಕಲಿ ಹಾಗೂ ಇಂಗ್ಲಿಷ್ ನಲಿ ಕಲಿಯ ಬಗ್ಗೆ ಚರ್ಚಿಸಲಾಯಿತು. ನಮ್ಮ ಶಾಲೆಯಲ್ಲಿಯೂ ಸಹ ಇಂಗ್ಲಿಷ್ ನಲಿ ಕಲಿ ಇರುವ ಕಾರಣ ಅದರ ತರಬೇತಿಯ ವಿವರಗಳು, ಅಲ್ಲಿ ಬಳಸಲ್ಪಡುವ ವಿವಿಧ ಸಂಪನ್ಮೂಲಗಳ ಬಗ್ಗೆ ಸಮಾಲೋಚಿಸಲಾಯಿತು.  ನಲಿ‌ಕಲಿಯಿಂದ ಕಲಿನಲಿ ಗೆ ಸಾಗುವಾಗ ಇರುವ ಕಂದರಗಳನ್ನು ಮತ್ತು ಅವುಗಳನ್ನು ನಿಭಾಯಿಸುವ ಬಗೆಯನ್ನು ಚರ್ಚಿಸಲಾಯಿತು. 


ದಿನಾಂಕ : 30/07/2020, ಗುರುವಾರ
ಶ್ರೀಮತಿ ಅರ್ಷಿಯಾ ನಾಜ್, ಗಣಿತ ಪಂಡಿತರು, ಕಲಬುರಗಿ
ಮೊ: 9538064440

ಇವರು ನಮಗೆ ಐಸಿಟಿ ವೆಬಿನಾರ್ ಗ್ರೂಪ್ ಮೂಲಕ ಪರಿಚಯ. ಇ -  ಕಂಟೆಂಟ್ ತಯಾರಿಸುವಾಗ ವಿಡಿಯೋ ಎಡಿಟಿಂಗ್ ಸಾಫ್ಟ್ ವೇರ್ ಆದ Wondershare Filmora ಬಗ್ಗೆ ಸಾಕಷ್ಟು ವಿಸ್ತೃತವಾದ ಮಾಹಿತಿಯನ್ನು ನೀಡಿದರು. ಅವರೊಂದಿಗೆ ಮತ್ತಷ್ಡು ವಿಷಯಗಳನ್ನು ಸಮಾಲೋಚಿಸಲಾಯಿತು


1 comment: