೧. ನಮ್ಮ ಜವಾಬ್ದಾರಿಗಳನ್ನು ಅರಿತು ನಡೆಯುವುದು :
ನಾವು ಒಬ್ಬ ಸಾಮಾನ್ಯ ನಾಗರಿಕಾರು ಅಂತ ಅಂದುಕೊಂಡರೆ ನಮಗೆ ನಮ್ಮದೇ ಆದ ಜವಾಬ್ದಾರಿಗಳಿರುತ್ತವೆ. ಅದರಲ್ಲೂ ನಾವೂ ಶಿಕ್ಷಕರಾಗಿರುವ ಕಾರಣ ಇನ್ನು ಹೆಚ್ಚಿನ ಜವಾಬ್ದಾರಿಗಳು ನಮ್ಮ ಹೆಗಲೇರುತ್ತವೆ. ಈ ನಿಟ್ಟಿನಲ್ಲಿ ನಾವು ಸರ್ಕಾರ ಜಾರಿ ಮಾಡುವ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಸಕ್ರಿಯ ಪಾತ್ರ ವಹಿಸಬೇಕು. ಯಾವುದೇ ತುರ್ತು ಸೇವೆಗಳು, ಯೋಜನೆಗಳು ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪುವಂತೆ ಕ್ರಮವಹಿಸಬೇಕು. ನಮ್ಮ ವೃತ್ತಿಯೇ ಅಧ್ಯಾಪನ ವೃತ್ತಿ. ಕಳಿಸುವುದು ನಮ್ಮ ಕರ್ತವ್ಯ. ಸೇವೆಯೂ ಕೂಡ. ಆದ್ದರಿಂದ ಸಾಧ್ಯವಾಗುವ ರೀತಿಯಲ್ಲಿ ನಮ್ಮ ವಿದ್ಯಾರ್ಥಿಗಳನ್ನು ತಲುಪುವ ಕೆಲಸವಾಗಬೇಕು.
೨. ಜಾಗೃತಿ ಮೂಡಿಸುವುದು :
ಈಗಾಗಲೇ ನಮ್ಮ ಅನೇಕ ಶಿಕ್ಷಕರಾದ ಸೋಮು ಕುದುರಿಹಾಳ, ವೀರಣ್ಣ ಮಡಿವಾಳರ, ರವಿ. ರಾ. ಕಂಗಳ, ನಿಂಗಪ್ಪ ಸಾಳಂಕಿ,ಶರಣಬಸವೇಶ್ವರ ಹಿರೇಮಠ ,ಪೊಲೀಸ್ ಇಲಾಖೆಯಲ್ಲಿನ ಮಿತ್ರರಾದ ಮೌಲಾಲಿ ಕೆ. ಆಲಗೂರ ಮುಂತಾದವರು ಈ ಕೊರೊನಾ ಬಗ್ಗೆ ಸಾಕಷ್ಟು ಗೀತ ಸಾಹಿತ್ಯ ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಅನೇಕ ಶಿಕ್ಷಕರ ಗುಂಪುಗಳು ಸ್ವಯಂ ಪ್ರೇರಿತರಾಗಿ ತಮ ತಮ್ಮ ಗ್ರಾಮಗಳಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ. ಅದರಂತೆ ನಾವೂ ಸಹ ನಮಗೆ ಎಷ್ಟು ಸಾಧ್ಯವೋ ಅಷ್ಟು ರೀತಿಯಲ್ಲಿ ನಮ್ಮೊಂದಿಗೆ ಮಾತಾಗುವ ಪೋಷಕರಾಗಲಿ, ಸ್ನೇಹಿತರಾಗಲಿ ಅವರೊಂದಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಬೇಕು. ಇಡೀ ಜಗತ್ತೇ ಇಂಥ ಮಹಾಮಾರಿಯ ವಿರುದ್ಧ ನಲುಗುತ್ತಿರುವಾಗ ಸಾಧ್ಯವಾದಷ್ಟು ರೀತಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು.
೩. ಸ್ವಯಂ ಸೇವಕರಾಗಿಕಾರ್ಯನಿರ್ವಹಿಸುವುದು :
ಕೊರೊನಾ ಎಂದರೆ ಮಾರು ದೂರ ಹಿಂದೆ ಸರಿಯುವವರ ಮಧ್ಯೆಇಂತಹ ಕೆಲಸ ಸಾಧ್ಯವಾ ಎಂಬುದು ನಮ್ಮನ್ನು ಕಾಡುತ್ತದೆ. ಆದರೆ ಮನಸ್ಸಿದ್ದಲ್ಲಿ ಮಾರ್ಗ ಎನ್ನುವಂತೆ ನಮ್ಮಿಂದ ಏನೂ ಬೇಕಾದರೂ ಮಾಡಲು ಸಾಧ್ಯ. ಈಗಾಗಲೇ ಅನೇಕ ಜನ ಶಿಕ್ಷಕ ಮಿತ್ರರಾದ ಶ್ರೀಮತಿ ಅರ್ಚನಾ ಜೈನ, ಶ್ರೀಮತಿ ಶ್ರೀ ರೇಣುಕಾ, ಓಕಳಿ ಗ್ರಾಮದ ಸರ್ಕಾರಿ ಶಾಲೆಯ ಎಲ್ಲ ಶಿಕ್ಷಕರು, ಗಂಗಾವತಿಯ ಸೋಮು ಕುದರಿಹಾಳ, ಜೇವರ್ಗಿಯ ಶ್ರೀ ಲಕ್ಷ್ಮಣ ಹಿಪ್ಪರಗಿ - ಹೀಗೆ ಅನೇಕ ಶಿಕ್ಷಕರು ಸ್ವಯಂ ಸೇವಾಕರ್ರಗಿ ವಠಾರ ಶಾಲೆ ಎಂಬ ಪರಿಕಲ್ಪನೆಯ ಅಡಿಯಲ್ಲಿ ಅಲ್ಲಲ್ಲಿ ಮಕ್ಕಳನ್ನು ಸೇರಿಸಿ ಪಾಠ ಮಾಡುತ್ತಿದ್ದಾರೆ. ಅದರಂತೆ ಈಗ ವಿದ್ಯಾಗಮ ಎಂಬ ಕಾರ್ಯಕ್ಫ್ರಾಮಕೂಡ ಬರುತ್ತಲಿದೆ. ಇಂಥ ಅಕಾರ್ಯಕ್ರಮದಲ್ಲಿ ನಾವೆಲ್ಲಾ ತೊಡಗಿಸಿಕೊಳ್ಳುವುದರಿಂದ ಕೊರೊನ ಜತೆಗೆ ನಮ್ಮ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದಾಗಿದೆ.
೪. ಕೇವಲ ವಠಾರ ಶಾಲೆಯಿಂದ ನಿಗದಿತ ಫಲಿತಾಂಶ ಸಾಧ್ಯವಿಲ್ಲ. ಸಾಕಷ್ಟು ಸುರಕ್ಷತಾ ಕ್ರಮಗಳನ್ನು ವಹಿಸಿ, ದೈಹಿಕ ಅಂತರವನ್ನು ಕಾಪಾಡಿಕೊಂಡು ಪಾಳಿ ಪದ್ಧತಿ ಹಾಗೂ ಸ್ಯಾಲರಿ ಪದ್ಧತಿ ಪಾಲಿಸಿ ಗ್ರಾಮದ ಈ, ಶಾಲೆಯ ಎಲ್ಲ ಮಕ್ಕಳೂ ಶಾಲೆಗೆ ಬರುವಂತೆ ಮಾಡಲೇಬೇಕು. ಇದರಿಂದ ನಾವೂ ಕಲಿಕೆಯನ್ನು ಉತ್ಕೃಷ್ಟಗೊಳಿಸಬಹುದು. ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇರುವ ಕಾರಣ ನಮ್ಮ ಮುಂದೆ ಇರುವ ಒಂದೇ ಒಂದು ಆಯ್ಕೆಯೆಂದರೆ ಸಾಕಷ್ಟು ಸುರಕ್ಷತಾ ಕ್ರಮಗಳು ಮಾತ್ರ. ಇದನ್ನು ಸರ್ಕಾರ ಕೊಡಮಾಡಬೇಕು.
ಕಾರ್ಯತಂತ್ರಗಳು :
- ಇಲಾಖೆಯು ಒಂದು ನಿಗದಿತವಾದ ಕ್ರಮದಲ್ಲಿ ಶಾಲೆಯನ್ನು ಪ್ರಾರಂಭಿಸಬೇಕು.
- ಮಕ್ಕಳ ಮತ್ತು ಶಿಕ್ಷಕರ ಸುರಕ್ಷತೆಗಾಗಿ ಸಾಕಷ್ಟು ಸುರಕ್ಷತಾ ಕ್ರಮಗಳು ಲಭ್ಯವಾಗುವಂತೆ ಯೋಜನೆ ತಯಾರಿಸಿ ಅದನ್ನು ಶಿಕ್ಷಣ ಇಲಾಖೆ ಹಾಗು ಆರೋಗ್ಯ ಇಲಾಖೆಗೆ ವಹಿಸಬೇಕು.
- ಮೇಲ್ಮಟ್ಟದ ಅಧಿಕಾರಿಗಳು ನಿಯಮಿತವಾಗಿ ಮಾರ್ಗದರ್ಶನ ಮಾಡಬೇಕು.
- ಶಿಕ್ಷಕರು ಬಹಳಷ್ಟು ಜಾಗ್ರತೆ ವಹಿಸಿ ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕು.
ಈ ರೀತಿಯಲ್ಲಿ ನಾನು ನನಗೆ ತಿಳಿದ ಮಟ್ಟಿಗೆ ನನ್ನ ಸಲಹೆ ಮತ್ತು ಕಾರ್ಯತಂತ್ರಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.
--- ಸಚಿನ್ ಕುಮಾರ್ ಹಿರೇಮಠ
No comments:
Post a Comment